ಅಧಿಪತಿ

ಒಂದು ಸೈನ್ಯದ ನೆಲೆಯನ್ನೊ ಒಂದು ಜನದ ತಂಡವನ್ನೊ ತನ್ನ ಅಧಿಕಾರದಲ್ಲಿರಿಸಿಕೊಂಡಿರುವ ಸೈನ್ಯಾಧಿಕಾರಿ (ಕಮ್ಯಾಂಡೆಂಟ್). ನೆಲೆಯ ಪ್ರಮಾಣ, ತಂಡದ ಜನಸಂಖ್ಯೆ, ನೆಲೆಯ ಮತ್ತು ಸೇನಾಬಲದ ಮಹತ್ವ- ಇವುಗಳನ್ನವಲಂಬಿಸಿ ಅವನ ದರ್ಜೆ ನಿರ್ಧರಿಸಲ್ಪಡುತ್ತದೆ. ಸೈನ್ಯದ ಒಬ್ಬ ಹಿರಿಯ ಅಧಿಕಾರಿಯನ್ನು ನಿರ್ದಿಷ್ಟವಾದೊಂದು ಸೇನಾದಳ (ಕೋರ್) ಅಥವಾ ಸೇನಾವಿಭಾಗದ (ರೆಜಿಮೆಂಟ್) ಯೋಗಕ್ಷೇಮವನ್ನು ನೋಡಿಕೊಳ್ಳಲು ನಿಯೋಜಿಸಿದಾಗ ಆ ಅಧಿಕಾರಿಯ ದರ್ಜೆಯನ್ನು ಸೂಚಿಸುವ ಕರ್ನಲ್ ಎಂಬ ಪದದ ಮುಂದೆ ಕಮ್ಯಾಂಡೆಂಟ್ ಎಂಬ ಮತ್ತೊಂದು ಗೌರವಾರ್ಥ ಸೂಚಕಪದ ಸೇರಿ ಆತ ಕರ್ನಲ್ ಕಮ್ಯಾಂಡೆಂಟ್ ಎನಿಸಿಕೊಳ್ಳುತ್ತಾನೆ.
								
(ಎ.ಎನ್.ಎಸ್.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ